
ಅಂತರ್ಜಾಲ ಎನ್ನುವುದು ಆಧುನಿಕ ಬದುಕಿನ ನಾಡಿಮಿಡಿತವೇ ಆಗಿಹೋಗಿದೆ. ಒಂದೇ ಒಂದು ಗಂಟೆ ಇಂಟರ್‌ನೆಟ್ ಸ್ತಬ್ಧಗೊಂಡರೆ ಸಾಕು ಇಡೀ ವಿಶ್ವವೇ ಆ ಒಂದು ಗಂಟೆ ನಿಶ್ಚಲವಾಗಿಬಿಡುತ್ತದೆ! ಹಾಗಿದೆ ಇಂಟರ್‌ನೆಟ್ ಮಹಿಮೆ
ಹೀಗೆ ಇಡೀ ವಿಶ್ವವನ್ನು ‘ಆನ್‌ಲೈನ್’ ಆಗಿಟ್ಟಿರುವ ಈ ಸೌಲಭ್ಯ ಅವತರಿಸಿ 40 ವರ್ಷಗಳು ಆಗಿವೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ?
ಅದು 1969ರ ಅಕೋಬರ್ 29. ಕಂಪ್ಯೂಟರ್ ಲೋಕದಲ್ಲಿ ಒಂದು ಮಹತ್ವದ ದಿನ. ಅರ್ಪಾನೆಟ್ (ARPANET) ಮೂಲಕ ಆ ದಿನ ಮೊಟ್ಟ ಮೊದಲ ಬಾರಿಗೆ ಎರಡು ಕಂಪ್ಯೂಟರ್ ನಡುವೆ ಸಂದೇಶ ರವಾನೆ ಮಾಡಲಾಯಿತು. ಅದುವೇ ಮುಂದೆ ಇಂಟರ್‌ನೆಟ್ ಎಂದು ಜನಜನಿತವಾಯಿತು.
ಇಂದು ಇಂಟರ್‌ನೆಟ್ ಅನ್ನು ಸೌಲಭ್ಯ ಎನ್ನುವುದಕ್ಕಿಂತ ಒಂದು ಅಗ–ತ್ಯ ಎಂದರೆ ಹೆಚ್ಚು ಸಮಂಜಸವೇನೋ. ಹಾಗಾಗಿ ಇಂಟರ್‌ನೆಟ್ ಸೌಲಭ್ಯ ಹೊಂದುವುದು ಎಲ್ಲರ ಹಕ್ಕು ಎಂದರೆ ತಪ್ಪಾಗಲಾರದು. ಅಂದಹಾಗೆ ಇತ್ತೀಚೆಗೆ ಫಿನ್‌ಲ್ಯಾಂಡ್‌ನಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಹೊಂದುವುದು ಕಾನೂನುಬದ್ಧ ಹಕ್ಕು ಎಂದು ಘೋಷಿಸಲಾಯಿತು. ಇಂಟರ್‌ನೆಟ್ ಸೌಲಭ್ಯ ಪಡೆಯುವುದು ಎಲ್ಲ ಪ್ರಜೆಗಳ ಹಕ್ಕು ಎಂದು ಘೋಷಿಸಿದ ಮೊಟ್ಟ ಮೊದಲ ದೇಶ ಎಂಬ ಹೆಗ್ಗಳಿಕೆ ಫಿ–ನ್‌ಲ್ಯಾಂಡ್‌ಗೆ ಸಲ್ಲುತ್ತದೆ
ಈಗಾಗಲೇ ಹೇಳಿದಂತೆ ಮೂಲತಃ ’ಅರ್ಪಾನೆಟ್’ ಎಂದು ಗುರುತಿಸಿಕೊಂಡಿದ್ದ ಅಂತರ್ಜಾಲ–ವನ್ನು ಮೊದಲು ಕಂಡುಹಿಡಿ–ದದ್ದು ಅಮೆ–ರಿಕ ರಕ್ಷಣಾ ಇಲಾಖೆ–ಯ –ಮುಂದುವರಿದ ಸಂಶೋಧನಾ ಯೋಜನೆ ಸಂಸ್ಥೆ (U.S. Department of Defense’s Advanced Research Proje cts Agency).
ಆರಂಭದಲ್ಲಿ ಕ್ಯಾಲಿ–ಫೋರ್ನಿಯಾದ ವಿಶ್ವ–ವಿದ್ಯಾ–ಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಇಂಟರ್‌ನೆಟ್ ಇದ್ದ ನಾಲ್ಕು ಕಂಪ್ಯೂಟರ್‌ಗಳನ್ನು ಅಳವಡಿಸಲಾ–ಯಿತು. ಹೀಗೆ ನಾಲ್ಕು ನೂರಾಯಿತು...ಸಾವಿರವಾಯಿತು....ಈಗಂತೂ ಮನೆಮನೆಯಲ್ಲೂ ಕಂಪ್ಯೂಟರ್ ಇದೆ. ವೆಬ್ ಕ್ಯಾಮೆರಾ ಮೂಲಕ ಜಗತ್ತಿನ ಯಾವುದೋ ಮೂಲೆಯಲ್ಲಿರುವ ಮಗಳನ್ನೋ, ಮಗನನ್ನೋ ನೋಡಿ, ಅವರೊಂದಿಗೆ ಸಂಭಾಷಣೆ ನಡೆಸಿ ಹಿರಿ–ಯರು ಖುಷಿಪಡುತ್ತಾರೆ. –ಒಂದೇ ಮಾತಿನಲ್ಲಿ ಹೇಳುವುದಾದರೆ ಇಡೀ ಜಗತ್ತನ್ನು ಅಂಗೈನಲ್ಲಿ ತಂದಿಟ್ಟಿದೆ ಈ ಇಂಟರ್‌ನೆಟ್!
‘ಪ್ಯಾಕೆಟ್ ಸ್ವಿಚಿಂಗ್-1969’ ರ ಮೊದಲ ಅಂತರ್ಜಾ–ಲ ಪ್ರಸರಣ ಕಾರ್ಯವಿಧಾನವಾಗಿತ್ತು. ಈಗಲೂ ಕೂಡ ಈ ತಂತ್ರಜ್ಞಾನವು ಇಂಟರ್‌ಗೆ ಆಧಾರವಾಗಿದೆ’ ಎಂದು ನುಡಿಯುತ್ತಾರೆ ಉಕ್ಲಾ (UCLA) –ಕಂಪ್ಯೂಟರ್ ಎಂಜಿನಿಯರ್ ಲಿಯೋನಾರ್ಡ್ ಕ್ಲೆನ್ ರಾಕ್. ಇವರು ‘ಅರ್ಪಾನೆಟ್’ ಅಭಿವೃದ್ಧಿಪಡಿಸುವಲ್ಲಿಯೂ ಭಾಗಿಯಾ–ಗ್ದಿದರು ಎನ್ನುವುದು ವಿಶೇಷ.
0 comments:
Post a Comment